Skip to main content

ಆಗ್ರಾ ಪ್ರವಾಸ ಕಥನ

ಆಗ್ರಾ ನಗರ ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ. ಆಗ್ರಾದ ಬಗ್ಗೆ ಹೇಳುವುದಾದರೆ ಈ ನಗರವು ಕೇವಲ ತಾಜ್ ಮಹಲ್ ನಿಂದಾಗಿ ಮಾತ್ರ ಇಷ್ಟೆಲ್ಲಾ ಹೆಸರುವಾಸಿಯಾಗಿದೆ ಎಂದು ಹೇಳಬಹುದು. ನಗರವು ಕೊಚ್ಚೆ ಕೊಂಪೆ ಹೋಗಿದೆ.

ನನ್ನ ಮೊಬೈಲ್ ನಲ್ಲಿ ಕ್ಲಿಕ್ ಮಾಡಿದ ಚಿತ್ರ (ನೋಕಿಯಾ ಲೂಮಿಯ 520)

ಇನ್ನು ದೆಹಲಿಯಿಂದ ಆಗ್ರಾಕ್ಕೆ ಹೋಗುವ ಬಗೆಯನ್ನು ವಿವರಿಸುತ್ತೇನೆ. ಮೊಟ್ಟಮೊದಲು ಆಗ್ರಾಕ್ಕೆ ಹೋಗಲು ಎರಡು ಪ್ರಮುಖ ರೀತಿ ಇದೆ.
1. ಸ್ವಂತ ವಾಹನ ಅಥವಾ ಸ್ವಂತ ಯೋಜನೆಯಿಂದ ಹೋಗುವುದು
2. ಪ್ಯಾಕೇಜ್ ಮೂಲಕ ಹೋಗುವುದು

ಪ್ಯಾಕೇಜ್ ಮೂಲಕ ಹೋಗುವುದಾದರೆ ನೀವು ಹಲವಾರು ಪ್ಲಾನ್ ಗಳಿವೆ. ರಾವ್ ಟ್ರಾವೆಲ್ಸ್ ಎನ್ನುವ ಬಸ್ಸು ಸರ್ವೀಸ ಪ್ರತೀ ದಿನ ದೆಹಲಿಯಿಂದ ಆಗ್ರಾ ಮತ್ತು ಮಥುರಾ ಪ್ರವಾಸ ಮಾಡಿಸುತ್ತದೆ. ಅದಲ್ಲದೆ ಹಲವಾರು ಕಂಪೆನಿಗಳು ಪ್ರತಿದಿನ ದೆಹಲಿ-ಆಗ್ರಾ-ಮಥುರಾ ಎಂದು ತನ್ನ ಸರ್ವೀಸ್ ಕೊಡುತ್ತದೆ. ಇದರಲ್ಲಿ ಹಲವಾರು ಸಮಸ್ಯೆಗಳು ಇದೆ. ಅವರು ಹೇಳಿದ ಸಮಯಕ್ಕೆ ಬರುವುದಿಲ್ಲ ಮತ್ತು ತಲುಪಿಸುವುದಿಲ್ಲ. ಡ್ರೈವರ್ ಎಲ್ಲೆಲ್ಲಿ ಸೆಟ್ಟಿಂಗ್ ಇರುತ್ತದೆ ಅಲ್ಲಲ್ಲಿ ಊಟ-ಚಾ ಕಾಪಿ ಎಂದು ನಿಲ್ಲಿಸುತ್ತಾನೆ. ಅಲ್ಲಿ ಆಹಾರ ಬೆಲೆ ಕಡಿಮೆ ಎಂದರೂ ತಲೆಗೆ 200-300 ಆಗುತ್ತದೆ. ನಂತರ ನಮ್ಮ ಜೊತೆಗೆ ಬೇರೆ ಬೇರೆ ಜನರು ಇರುತ್ತಾರೆ. ಕೆಲವು ಸ್ಟೂಡೆಂಟ್ ಗಳು, ಮತ್ತೆ ಕೆಲವು ಪಕ್ಕಾ ನಿಶಬ್ದ ಪ್ರಿಯರು ಹಾಗೆ ಹೀಗೆ ಎಂದು. ಸೊ ನೀವು ಸ್ವಂತಿಕೆಯ ಸ್ವಾತಂತ್ಯ ಬೇಕು ಎನ್ನುವ ಮನಸ್ಸಿನವರು ಆಗಿದ್ದರೆ ನೀವು ಸ್ವಂತವಾಗಿ ಹೋಗುವುದು ಉತ್ತಮ.

ಆಗ್ರಾಕ್ಕೆ ಸ್ವಂತವಾಗಿ ಹೋಗುವುದಿದ್ದರೆ ನೀವು ರೈಲು , ಕಾರ್ ಮತ್ತು ಬೈಕ್ ಮೂಲಕ ಹೋಗಬಹುದು. ರೈಲು ಮೂಲಕ ಹೋಗುವುದಿದ್ದರೆ ಗತಿಮಾನ್ ಎಕ್ಸ್ಪ್ರೆಸ್ , ತಾಜ್ ಎಕ್ಸ್ಪ್ರೆಸ್ ಈ ಎರಡು ರೈಲುಗಳು ಅತ್ಯುತ್ತಮ. ಗತಿಮಾನ್ ಹಣದಲ್ಲಿ ಜಾಸ್ತಿ ಮತ್ತು ಕೇವಲ ಒಂದು ಘಂಟೆ ಸಮಯದಲ್ಲಿ ನಿಮ್ಮನ್ನು ಆಗ್ರಾಕ್ಕೆ ತಲುಪಿಸುತ್ತದೆ. ತಾಜ್ ನಿಮ್ಮನ್ನು ಎರಡು ಘಂಟೆಯಲ್ಲಿ ತಲುಪಿಸುತ್ತದೆ. ಸ್ವಲ್ಪ ಖರ್ಚು ಕಡಿಮೆ ಆಗುತ್ತದೆ.

ಇನ್ನು ಕಾರಿನಲ್ಲಿ ಹೋಗುತ್ತೀರಾ ಎಂದರೆ ಸ್ವಂತ ಕಾರಿನಲ್ಲಿ ಹೋಗಬಹುದು, ಬಾಡಿಗೆ ಕಾರಿನಲ್ಲಿ ಕೂಡ ಹೋಗಬಹುದು. ದೆಹಲಿಯಿಂದ ಯಮುನಾ ಎಕ್ಸ್ಪ್ರೆಸ್ ವೆ ನಲ್ಲಿ ಹೋದರೆ ನಿಮಗೆ ಅದು ಒಂದು ಉತ್ತಮ ಅನುಭವವನ್ನು ಕೊಡುತ್ತದೆ. ಟೋಲ್ ಕೂಡ ನಿಮ್ಮ ಪಾಕೆಟ್ ಖಾಲಿ ಮಾಡುತ್ತದೆ. ಇಲ್ಲದಿದ್ದರೆ ಮಥುರಾ ಮಾರ್ಗವಾಗಿ ಕೂಡ ಹೋಗಬಹುದು.

ಆಗ್ರಾ ಕೋಟೆಯ ಮುಖ್ಯ ಹಾಲ್ ಗೆ ಹೋಗುವ ದ್ವಾರ


ಇನ್ನು ಆಗ್ರಾದಲ್ಲಿ ನೀವು ಯಾವತ್ತು ಆಟೋದಲ್ಲಿ ಹೋಗಬೇಡಿ. ಏಕೆಂದರೆ ಅವರು ಹೇಳುವ ದರ ಒಂದಕ್ಕಿಂತ ಹತ್ತು ಪಟ್ಟು ಹೆಚ್ಚು ಇರುತ್ತದೆ. ಕೆಲವೊಮ್ಮೆ ಅವರು ತಲೆಗೆ ನೂರು ರೂ ಎಂದು ನಿಮ್ಮ ಜೊತೆ ಇನ್ನೂ ೫ ಸವಾರಿ ಹಾಕಿ ಕರೆದುಕೊಂಡು ಹೋಗುವ ಪದ್ಧತಿ ಇದೆ. ಅಲ್ಲಿ ಸದ್ಯ ಓಲಾ ಕಂಪೆನಿ ತನ್ನ ಸರ್ವೀಸ್ ಅನ್ನು ಆರಂಭಿಸಿದೆ. ಆಗ್ರಾ ಕ್ಯಾಂಟ್ ರೈಲ್ವೆ ಸ್ಟೇಷನ್ ಇಂದ ತಾಜ್ ಮಹಲ್ ನ ಪೂರ್ವ ಗೇಟ್ ಟಿಕೆಟ್ ಕೌಂಟರ್ ತನಕ (ಈ ಗೇಟ್ ಮಾಮೂಲಿ ಗೇಟ್ ನಿಂದ ಸ್ವಲ್ಪ ದೂರದಲ್ಲಿದೆ ಹೆಚ್ಚಾಗಿ ಖಾಲಿ ಸಿಗುತ್ತದೆ. ಮಾಮೂಲು ಆಟೋದವರು ಇಲ್ಲಿಗೆ ಬರಲು ಒಪ್ಪುವುದಿಲ್ಲ. ಬಂದರೂ ಬಹಳ ಹಣ ಕೇಳುತ್ತಾರೆ. ) ಸುಮಾರು 170ರೂ ಚಾರ್ಜ್ ಮಾಡುತ್ತಾರೆ.
ಮಹಾರಾಜನ ವಿಲಾಸಿ ಸ್ಥಳ - ಆಗ್ರಾ ಫೋರ್ಟ್ 


ಇನ್ನು ಆಗ್ರಾ ಫೋರ್ಟ್ ಮತ್ತು ತಾಜ್ ಮಹಲ್ ಗೆ ಈಗ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಆಗುತ್ತದೆ. ಅಲ್ಲೇ ನೀವು ಟಿಕೆಟ್ ಬುಕ್ ಮಾಡಿ ಹೋದಲ್ಲಿ ನಿಮಗೆ ಕಿರಿಕಿರಿ ತಪ್ಪುತ್ತದೆ. ತಾಜ್ ಮಹಲ್ ಒಳಗಿನ ಮುಖ್ಯ ಮಹಲ್ ಗೆ ಹೋಗಲು ನೀವು ಚಪ್ಪಲಿ/ಶೂ ಮೇಲೆ ಕವರ್ ಕೂಡ ಹಾಕಿಕೊಂಡು ಹೋಗಬೇಕಾಗುತ್ತದೆ. ಏಕೆಂದರೆ ಅದು ಅಮೃತ ಶಿಲೆಯಿಂದ ಮಾಡಿದ ಕಟ್ಟಡ. ನಿಮ್ಮ ಚಪ್ಪಲಿ ಶೂ ನಲ್ಲಿ ಮೆತ್ತಿಕೊಂಡಿರುವ ಮಣ್ಣು ತಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.
ಆಗ್ರಾ ಕೋಟೆಯಿಂದ ಕಂಡ ತಾಜ್ ಮಹಲ್ 


ತಾಜ್ ಮಹಲ್ ನಂತರ ನೀವು ನೋಡಬೇಕಾದ ಸ್ಥಳ ಆಗ್ರಾ ಫೋರ್ಟ್. ಈ ಫೋರ್ಟ್ ಅಕ್ಬರ್ ಮಹಾರಾಜ ತನ್ನ ಆಳ್ವಿಕೆಯ ಕಾಲದಲ್ಲಿ ಅಭಿವೃದ್ದಿ ಪಡಿಸಿದ್ದ. ಇಲ್ಲಿ ನೀವು ಅಕ್ಬರ್ ಕಾಲದ ಆಡಳಿತ ಪ್ರದೇಶವನ್ನು ನೋಡಬಹುದು. ಅಲ್ಲದೆ ರಾಣಿ ಜೋಧಾಬಾಯಿ ತನ್ನ ಜೊತೆ ತಂದಿದ್ದ ಮೂರ್ತಿಯ ಸ್ಥಾಪಿಸಿದ ಮಂದಿರ ಕೂಡ ಈ ಕೊಟೆಯಲ್ಲಿದೆ.
ಆಗ್ರಾ ಕೋಟೆಯಲ್ಲಿನ ದರ್ಬಾರ್ ಹಾಲ್. ಎದುರು ಕಾಣುವ ಮಂಟಪದಲ್ಲಿ ಮಹಾರಾಜ ಕುಳಿತು ಆದೇಶ ಕೊಡುತ್ತಾನೆ. ಇದನ್ನು ನೀವು ಜೋಧಾ ಅಕ್ಬರ್ ಚಿತ್ರದಲ್ಲಿ ನೋಡಬಹುದು. 


ಆಗ್ರಾದಲ್ಲಿ ಹಲವಾರು ಕರ್ನಾಟಕ ಶೈಲಿಯ ಹೋಟೆಲ್ ಇದೆ. ಉಡುಪಿ ಹೋಟೆಲ್ ಸುಮಾರು ೩ ಕಡೆ ಇದೆ. ಆದುದರಿಂದ ನೀವು ಹೊಟ್ಟೆ ಬಗ್ಗೆ ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ. ಆಗ್ರಾದಲ್ಲಿ ದಕ್ಷಿಣ ಭಾರತೀಯ ಶೈಲಿಯ ಆಹಾರ ಬೇಕಾದಷ್ಟು ಕಡೆ ಇದೆ.

ಇನ್ನು ಆಗ್ರಾದಲ್ಲಿ ಚರ್ಮದ ವಸ್ತುಗಳು ಕಡಿಮೆದರದಲ್ಲಿ ಮತ್ತು ಉತ್ತಮ ಗುಣಮಟ್ಟದಲ್ಲಿ ಸಿಗುತ್ತದೆ. ಚರ್ಮದ ಚೀಲ, ಚಪ್ಪಲಿ, ಹಂಟರ್, ಜಾಕೆಟ್ ಇಲ್ಲಿ ಕೊಂಡುಕೊಳ್ಳಬಹುದು. ಇದಲ್ಲದೆ ಸಿಹಿತಿಂಡಿ ಪೇಟಾ (ಕುಂಬಳಕಾಯಿ ಹಲ್ವಾ) ಕೂಡ ಇಲ್ಲಿನ ಪ್ರಸಿದ್ದ ತಿಂಡಿ. ಇಲ್ಲಿನ ಪಂಚಿ ಪೇಟಾ ಹಲವಾರು ಫ್ಲೇವರ್ ನಲ್ಲಿ ಪೇಟವನ್ನು ಮಾರುತ್ತದೆ. ಇನ್ನು ನೀವು ಆಟೋದಲ್ಲಿ ಹೋದರೆ ಅಥವಾ ಪ್ಯಾಕೇಜ್ ನಲ್ಲಿ ಹೋದರೆ ನಿಮಗೆ ಅವರು ಸರಕಾರೀ ವಸ್ತು ಸಂಗ್ರಹಾಲಯ ಎಂದು ಒಂದು ಕಡೆ ಕರೆದುಕೊಂಡು ಹೋಗುತ್ತಾರೆ.ಅಲ್ಲಿ ನಿಮಗೆ ಸಿಗುವ ವಸ್ತು ಹೊರಗಡೆ ಅಂಗಡಿಗಳಲ್ಲಿ ಕಡಿಮೆ ದರಕ್ಕೆ ಸಿಗುತ್ತದೆ.
All images are privet. 

Comments

Post a Comment

Popular posts from this blog

How Seedr Became My Go-To Torrent Solution as a Blogger and Creator

Seedr Review – The Best Cloud Torrent Downloader I've Used As a content creator and blogger, I often need to download large files such as documentaries, stock footage, open-source tools, or eBooks. Traditional torrent clients can be slow, cluttered with ads, and even risky for your system. That’s when I discovered Seedr , and honestly, it’s been a total game-changer. Seedr is a powerful cloud-based torrent client that works entirely from your browser. No need to install anything, no risk of malware, and no exposure of your IP. You just paste a magnet link or upload a .torrent file, and Seedr will download it to your secure cloud space in no time. It’s lightning-fast, clean, and incredibly simple to use. What I love most is how fast Seedr downloads files. Their servers are super quick, and you can even stream videos directly before downloading them. It also works great across devices — I can access my files on my phone, tablet, or laptop anytime, anywhere. It's truly a ...

ಕೇಸರಿಯಾ, ಪಧಾರೋ ಮಾರೋ ದೇಸ್ !!

ರಾಜಸ್ಥಾನದ ಜನಪ್ರಿಯ ಜಾನಪದ ಗೀತೆ ಆದ ಈ ಹಾಡು ಬಹಳ ದಿನದಿಂದ ನನ್ನ ಮನಸ್ಸಿನಲ್ಲಿ ಗುನುಗುತ್ತಿತ್ತು. ನಾನು ವಾಸವಾಗಿರುವ ಗುರುಗ್ರಾಮದಿಂದ ಬಹಳ ದೂರ ಇರಲಿಲ್ಲ. ಸುಮಾರು 50 ಕಿಮಿ ಹೈವೇ ನಲ್ಲೆ ಹೋದರೆ ಹರ್ಯಾಣ ಗಡಿದಾಟಿ ರಾಜಸ್ಥಾನ ತಲುಪುತ್ತೇನೆ. ಗುರುಗ್ರಾಮ ಬಂದು ಬಹಳ ದಿನ ಆದರೂ ರಾಜಸ್ತಾನ ತಿರುಗುವ ಭಾಗ್ಯ ನನಗೆ ಬರಲಿಲ್ಲ. ಕಾರ್ಯ ನಿಮಿತ್ತ ಹಲವಾರು ಭಾರಿ ಹೋದರು ಸ್ಥಳೀಯ ಭಾಷೆ, ಆಹಾರ, ಸೌಂದರ್ಯವನ್ನು ಸವಿಯಲು ಆಗಿಯೇ ಇರಲಿಲ್ಲ. ಒಮ್ಮೆ ನನ್ನ ಪ್ರಿಯ ಮಿತ್ರ ದಿವಂಗತ ಅಭಿಷೇಕ್ ಚೌದರಿ ರಾಜಸ್ತಾನ ಬೈಕ್ ಟ್ರಿಪ್ ಹೊಡೆಯುವ ಬಗ್ಗೆ ಕುಟುಕಿದ. ನಾನೋ ಜಿರಳೆ ಥರ. ಮೀಸೆ ನುಗ್ಗಲು ಜಾಗ ಸಿಕ್ಕಿದರೆ ಅಲ್ಲಿ ದೇಹವನ್ನೇ ನುಗ್ಗಿಸುವವನು. ಅವನು ಹೇಳಿದ್ದು ಶುಕ್ರವಾರ ಬೆಳಿಗ್ಗೆ ೧೦  ಘಂಟೆಗೆ. ಅತೀಉತ್ಸಾಹಿ ನಾನು ಅವನನ್ನು ಹೇಗೋ ಮಾಡಿ ಒಪ್ಪಿಸಿದೆ. ಕಚೇರಿಯ ಕೆಲಸ ಕೂಡ ಬೇಗ ಮುಗಿದ ಕಾರಣ ತಕ್ಷಣಕ್ಕೆ ನಮಗೆ ರಜೆ ಕೂಡ ದೊರಕಿತು. (ಅದು ನನ್ನ ಜೀವನದಲ್ಲಿ ಮೊದಲ ಮತ್ತು ಕೊನೆಯ ಬಾರಿ ನಡೆದದ್ದು). ನಾವು ಮಧ್ಯಾಹ್ನ ಎರಡು ಘಂಟೆಗೆ ಮನೆಗೆ ಹೋಗಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಮೂರು ಮೂವತ್ತರ ಅಂದಾಜಿಗೆ ನಮ್ಮ ಟ್ರಿಪ್ ಆರಂಭಿಸಿದೆವು. ಆರಂಭದಲ್ಲೇ ವಿಘ್ನ ಎನ್ನುವ ರೀತಿ ಹೊರಟು ಹತ್ತು ನಿಮಿಷದಲ್ಲಿಯೇ ಮಳೆ ಬರಬೇಕೆ ? ಗುರುಗ್ರಾಮದಲ್ಲಿ ರಾಷ್ಟ್ರೀಯ ಹೈವೇ ತಲುಪುವಲ್ಲಿ ನಿಂತು ಸುಮಾರು ೨೦ ನಿಮಿಷಗಳ ಕಾಲ ಕಾದೆವು. ಕೊನೆಗೆ ಮಳೆ ನಿಂತು ಹೋಯಿತು. ಅಲ್...

Seedr ಎನ್ನುವ ವೆಬ್ಸೈಟ್ ಬಗ್ಗೆ

 ನಾವು ಟೊರ್ರೆನ್ಟ್  ನಲ್ಲಿ ಬೇಕಾದಷ್ಟು ವಿಡಿಯೋ, ಸಾಫ್ಟ್ವೇರ್ ಅಥವಾ ಬೇರೆ ರೀತಿಯ ವಸ್ತುಗಳನ್ನು ಡೌನ್ಲೋಡ್ ಮಾಡುತ್ತೇವೆ. ಆದರೆ ಅದನ್ನು ಡೌನ್ಲೋಡ್ ಮಾಡಬೇಕಾದರೆ ನಿಮ್ಮ ಕಂಪ್ಯೂಟರ್ ನಲ್ಲಿ ಟೊರ್ರೆನ್ಟ್ ಅನ್ನು ಇನ್ಸ್ಟಾಲ್ ಮಾಡಲೇ ಬೇಕು. ಆ ಸಾಫ್ಟ್ವೇರ್ ಇಲ್ಲದೆ ಇದ್ದಲ್ಲಿ ನಿಮಗೆ ಇದು ಸಾಧ್ಯವಿಲ್ಲ. ಆದರೆ ಈಗ ಅದಕ್ಕೆ ಒಂದು ಉಪಾಯ ಇದೆ ಅದು ಏನೆಂದರೆ seedr  ಎನ್ನುವ ವೆಬ್ಸೈಟ್ ಗೆ ಹೋಗುವುದು ಹೇಗೆ ? ಇಲ್ಲಿದೆ ನೋಡಿ  ೧. https://www.seedr.cc/ - ಈ ವೆಬ್ಸೈಟ್ ಗೆ ಹೋಗಿ  ೨. ಅಲ್ಲಿ ನಿಮ್ಮ ಇಮೇಲ್ ID ಕೊಟ್ಟು ನೀವು ಲಾಗಿನ್ ಆಗಿ  ನಂತರ ಒಳಗೆ ಕೊಟ್ಟಿರುವ ಲಿಂಕ್ ನಲ್ಲಿ ಟೊರ್ರೆನ್ಟ್ ಲಿಂಕ್ ಪೇಸ್ಟ್ ಮಾಡಿ ಮತ್ತು ವಿಡಿಯೋ ವನ್ನು ಆನಂದಿಸಿ